Wednesday, July 15, 2009

ಇಂತಿ ನಿನ್ನ ಪ್ರೀತಿಯ

ಇಲ್ಲಿ ನಾನು ಬರೆದಿರುವ ಕವನಗಳು ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಬಂದಿರುವ ಕವನ ಕಥನದ ಶೈಲಿಯಲ್ಲಿದೆ... ನನಗೆ ಈ ಶೈಲಿ ತುಂಬಾ ಇಷ್ಟ ಆಯಿತು. ಹಾಗಾಗಿ ನಾನು ಈ ಕವನಗಳನ್ನು ಬರೆದೆ.


ಹಗಲಲ್ಲಿ ಸೂರ್ಯನಿಂದ ಬೆಂದ
ಇರುಳಲ್ಲಿ ಚಂದ್ರನ ನೋಡೆ ಕಾಣಿಸುವುದು ನಿನ್ನಂದ
ನಿನ್ನ ನೆನಪಿನಲ್ಲಿ ಪರಿತಪಿಸುತ್ತಿರುವ ಈ ಪ್ರೇಮಿ ಬರೆದ
ಖಾಲಿ ಖಾಲಿ ಕಾಗದ
ಇಂತಿ ನಿನ್ನ ಪ್ರೀತಿಯ
- ನಾನ್ಯಾರೋ


ರೋಮಾಂಚನ ಗೊಳಿಸಿದೆ ನಿನ್ನಂದ
ಬಣ್ಣಿಸಲು ಸಿಗುತ್ತಿಲ್ಲ ನನಗೆ ಪದ
ನನ್ನ ಉಸಿರಲ್ಲಿ ನೀನು ಬೆರೆತಾಗ ನಾನು ಬರೆದ
ಖಾಲಿ ಖಾಲಿ ಕಾಗದ
ಇಂತಿ ನಿನ್ನ ಪ್ರೀತಿಯ
- ನಾನ್ಯಾರೋ

ನೀನು ನನ್ನ ಮುಂದೆ ಬಂದಾಗ
ನಿನ್ನಂದಕೆ ನಾ ಸೋತಾಗ
ಆ ನಡೆ ನುಡಿ ನನ್ನ ಸೆಳೆದಾಗ ನಾನು ಬರೆದ
ಖಾಲಿ ಖಾಲಿ ಕಾಗದ
ಇಂತಿ ನಿನ್ನ ಪ್ರೀತಿಯ
- ನಾನ್ಯಾರೋ